ಹೆಮ್ಮೆಯ ಕನ್ನಡತಿ ಇನ್ಫೋಸಿಸ್ ಸಂಸ್ಥೆಯ ಒಡತಿಯಿಂದ ದೇವದಾಸಿಯರ ಕಲ್ಯಾಣಕ್ಕಾಗಿ 25 ಲಕ್ಷ ರೂಪಾಯಿ ದೇಣಿಗೆ.

0
1297
Amitabh-Bachchan-Sudha-Murthy

ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ “ಕೌನ್ ಬನೇಗಾ ಕರೋಡ್ ಪತಿ” ಕೂಡ ಒಂದು . ಹಿಂದಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮವನ್ನು ಬಾಲಿವುಡ್ ನ ಖ್ಯಾತ ನಟರಾದ “ಅಮಿತಾಭ್ ಬಚ್ಚನ್” ರವರು ಅದ್ಭುತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮವು 11 ಸರಣಿಗಳನ್ನು ಪೂರ್ತಿಮಾಡಿದೆ. 11 ನೇ ಸರಣಿಯ ಅಂತಿಮ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯನ್ನು ಆಹ್ವಾನಿಸಿದ್ದರು. ಅವರೇ ನಮ್ಮ ಹೆಮ್ಮೆಯ ಕನ್ನಡತಿ, ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷೆ “ಶ್ರೀಮತಿ ಸುಧಾಮೂರ್ತಿ” ರವರು.

 

ಕಾರ್ಯಕ್ರಮದ ಪ್ರಾರಂಭದಲ್ಲಿ ಅಮಿತಾಬ್ ಬಚ್ಚನ್ ರವರಿಗೆ ಉತ್ತರ ಕರ್ನಾಟದವರು ವಿಶೇಷವಾಗಿ ತಯಾರಿಸುವ, ದೇವದಾಸಿಯರಿಂದ ತಯಾರಿಸಲ್ಪಟ್ಟ ಕೌದಿಯೊಂದನ್ನು ಉಡುಗೊರೆಯನ್ನಾಗಿ ನೀಡಿದರು. ಈ ಉಡುಗೊರೆಯಿಂದ ಈ ಕಾರ್ಯಕ್ರಮವು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದೆ ಎಂದು ಅಮಿತಾಬ್ ಸಂತಸ ವ್ಯಕ್ತ ಪಡಿಸಿದರು . ಸುಧಾಮೂರ್ತಿ ರವರು ತಮ್ಮ ಜೀವನದ ಹಲವು ವಿಷಯಗಳನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಂಡರು.

Meet--Sudha-Murthy-the-first-woman-engineer-in-Hubli-and-chairperson-of-infosys-iDiva-3_5ddf7bad71418

ಲಕ್ಷಾಂತರ ಜನರ ಉದ್ಯೋಗಧಾತೇಯಾಗಿ, ಸರಳತೆ & ಅನೇಕ ಸಮಾಜಸೇವೆ ಗಳಿಂದ ಪ್ರಸಿದ್ಧಿಯಾಗಿರುವ ಶ್ರೀಮತಿ ಸುಧಾಮೂರ್ತಿ ರವರು ಕೆ.ಬಿ.ಸಿ ಯಲ್ಲಿ ಪಾಲ್ಗೊಂಡು 25 ಲಕ್ಷ ರೂಪಾಯಿ ಗಳನ್ನೂ ಗಳಿಸಿದರು. ತಾವು ಗಳಿಸಿದ ಪೂರ್ತಿ ಹಣವನ್ನು ದೇವದಾಸಿಯರ ಕಲ್ಯಾಣಕ್ಕಾಗಿ ದೇಣಿಗೆಯಾಗಿ ನೀಡಿ ಇಡೀ ದೇಶದ ಮನ ಗೆದ್ದಿದ್ದಾರೆ. ಇವರು ಎಷ್ಟೇ ದೊಡ್ಡ ಶ್ರೀಮಂತರಾಗಿದ್ದರು ಇವರ ಸರಳತೆಯು ಮತ್ತು ಇವರು ಮಾಡುವ ಸಮಾಜಸೇವೆಗಳಿಂದ ನಮಗೆಲ್ಲ ಆದರ್ಶವಾಗಿದ್ದಾರೆ.