ಬೆಂಗಳೂರಿನಲ್ಲಿ ನೋಡಲೇಬೇಕಾದ ಪ್ರಮುಖ 10 ಸ್ಥಳಗಳು

0
2825
Bengaluru

ಕರ್ನಾಟಕದ ರಾಜಧಾನಿ ಹಾಗು ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಬೆಂಗಳೂರು ವಿವಿಧತೆಗಳ ತಾಣವಾಗಿದೆ. ಇಲ್ಲಿ ಭಾರತದ  ಎಲ್ಲ ಭಾಷೆಯ, ರಾಜ್ಯದ,  ಜನರನ್ನು ಕಾಣಬಹುದು ಆದ್ದರಿಂದ  ಈ ನಗರಕ್ಕೆ ಕಾಸ್ಮೋಸಿಟಿ ಎಂದು ಮತ್ತು ಹೆಚ್ಚಿನ  ಉದ್ಯಾನವನಗಳಿಂದ   “ಉದ್ಯಾನ ನಗರಿ ”  ಎಂದು ಕರೆಯುತ್ತಾರೆ.  ಉದ್ಯೋಗವನ್ನೇ  ಅವಲಂಬಿತವಾಗಿರುವ ಜನರಿಗೆ ರಜಾ ದಿನಗಳಲ್ಲಿ ಕಡಿಮೆ ವೆಚ್ಚ ಮತ್ತು ಕಡಿಮೆ  ಸಮಯದಲ್ಲಿ ಬೆಂಗಳೂರಿನಲ್ಲಿ ನೋಡಬಹುದಾದ ಪ್ರಮುಖ 10 ಸ್ಥಳಗಳು ಈ ಕೆಳಗಿನಂತಿವೆ.

ವಿಧಾನಸೌಧ

ವಿಧಾನಸೌಧ

ಬೆಂಗಳೂರು ಅಂದ ಕ್ಷಣ ಮನಸ್ಸಿಗೆ ಬರುವ ಚಿತ್ರ ವಿಧಾನಸೌಧ.  ದ್ರಾವಿಡ ಶೈಲಿಯಲ್ಲಿ ನಿರ್ಮಿತವಾಗಿರುವ ಈ ಭವ್ಯ ಕಟ್ಟಡವನ್ನು  ಆಗಿನ ಕರ್ನಾಟಕದ ಮುಖ್ಯಮಂತ್ರಿಗಳಾದ   “ಕೆಂಗಲ್ ಹನುಮಂತಯ್ಯ” ನವರ ನೇತೃತ್ವದಲ್ಲಿ 60  ಎಕರೆ ಜಾಗದಲ್ಲಿ , ಆಗಿನ 1 .75  ಕೋಟಿ ರೂ. ವೆಚ್ಚದಲ್ಲಿ , 4  ವರ್ಷಗಳ ಕಾಲಾವಧಿಯಲ್ಲಿ , 5000ಕ್ಕೂ ಹೆಚ್ಚು ಕೆಲಸಗಾರರಿಂದ 1952 ರಲ್ಲಿ ಆರಂಭಿಸಿ  1956  ಕ್ಕೆ ಪೂರ್ಣಗೊಳಿಸಿದರು. ಆಗಿನ ಪ್ರಧಾನ ಮಂತ್ರಿಗಳಾಗಿದ್ದ ಜವಾಹರ್ ಲಾಲ್ ನೆಹರು ರವರಿಂದ 1951  ಜೂಲೈ 13  ರಂದು ಶಂಕುಸ್ಥಾಪನೆ ನೆರೆವೇರಿತು. ಅಂದಿನಿಂದ ಇಂದಿನವರೆಗೂ ವಿಧಾನಸೌಧವು ಕರ್ನಾಟಕದ ವಿಧಾನ ಮಂಡಲದ ಸಭೆ ನಡೆಯುವ ಸ್ಥಳವಾಗಿದೆ. ನಿರ್ದಿಷ್ಟ ಸಮಯದಲ್ಲಿ ಸಾರ್ವಜನಿಕರಿಗೆ ಕಟ್ಟಡದ ಒಳಾಂಗಣವನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ.

ಲಾಲ್ಬಾಗ್

ಲಾಲ್ ಬಾಗ್

ಭಾರತದ ಪ್ರಮುಖ ಉದ್ಯಾನವನಗಳಲ್ಲಿ ” ಲಾಲ್ ಬಾಗ್” ಉದ್ಯಾನವನವು ಒಂದಾಗಿದೆ. 18ನೇ ಶತಮಾನದಲ್ಲಿ ಹೈದರಾಲಿ ರವರು ಪ್ರಪ್ರಥಮವಾಗಿ ಯೋಜನೆಯನ್ನು ಆಯೋಜಿಸಿದರು. ಇಲ್ಲಿ ವಿವಿಧ ಬಗೆಯ ಸಸ್ಯ , ಮರಗಳನ್ನು ಕಾಣಬಹುದು.  ಪ್ರತಿ ವರ್ಷ ಸ್ವಾತಂತ್ರ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಪ್ರಯುಕ್ತ ಇಲ್ಲಿ ಪುಷ್ಪ ಪ್ರದರ್ಶನ ನಡೆಯಲಿದೆ. ಈ ಪ್ರದಶನಕ್ಕೆ ಸಾರ್ವಜನಿಕರು ಭೇಟಿ ನೀಡಿ ವಿವಿಧ ಬಗೆಯ ಹೂವು ಗಳನ್ನೂ ವೀಕ್ಷಿಸಬಹುದು. ಬೆಂಗಳೂರಿನಲ್ಲಿ ಪ್ರಶಾಂತ ವಾತಾವರಣ ಮತ್ತು ಪ್ರಕೃತಿಯ ಸವಿಯನ್ನು ಸವಿಯಲು ಇಲ್ಲಿಗೆ ಭೇಟಿ ನೀಡಬಹುದು.

ಕಬ್ಬನ್ಪಾರ್ಕ್

ಕಬ್ಬನ್ ಪಾರ್ಕ್

ಬೆಂಗಳೂರಿನ ಮತ್ತೊಂದು ಪ್ರಮುಖ ಉದ್ಯಾನವನ ಕಬ್ಬನ್ ಪಾರ್ಕ್ . 1864  ರಲ್ಲಿ ಬ್ರಿಟಿಷ್ ಗವರ್ನರ್ ” ಲಾರ್ಡ್ ಕಬ್ಬನ್” ರ ನೇತೃತ್ವದಲ್ಲಿ ಸ್ಥಾಪನೆಯಾಯಿತು. ಇಲ್ಲಿಯೂ ವಿವಿಧ ಬಗೆಯ ಸಸ್ಯ , ಮರಗಳನ್ನು ಕಾಣಬಹುದು . ಇಲ್ಲಿ ಮಕ್ಕಳಿಗೆ ಆಟವಾಡಲು  ವಿವಿಧ ಸಾಮಗ್ರಿಗಳ ವ್ಯವಸ್ಥೆ ಇದೆ , ಮಕ್ಕಳ ಮನರಂಜನೆಗಾಗಿ ಮಕ್ಕಳ- ರೈಲಿನಲ್ಲಿ ಪ್ರಯಾಣ ಮಾಡುವ ವ್ಯವಸ್ಥೆ ಇದೆ .ಭಾನುವಾರದ  ರಜಾ ದಿನಗಳಲ್ಲಿ  ಉತ್ತಮ ವಾತಾವರಣಕ್ಕಾಗಿ ಇಲ್ಲಿಗೆ ಭೇಟಿ ನೀಡಬಹುದು.

ಬೆಂಗಳೂರು ಅರಮನೆ 

ಬೆಂಗಳೂರು ಅರಮನೆ

ಬೆಂಗಳೂರು ಅರಮನೆಯು 1862  ರಲ್ಲಿ  “ರೆವ್ ಜೆ ಗ್ಯಾರೆಟ್” ರವರಿಂದ ಸ್ಥಾಪಿಸಲ್ಪಟ್ಟಿತು. ನಂತರ 1884  ರಲ್ಲಿ ಒಡೆಯರ್ ರಾಜವಂಶಸ್ಥರಾದ “ಚಾಮರಾಜ ಒಡೆಯರ್” ರವರು ಖರೀದಿಸಿದರು.  ಇಂದಿಗೂ ಈ ಅರಮನೆಯಲ್ಲಿ ರಾಜವಂಶಸ್ಥರು ವಾಸ ಮಾಡುತ್ತಿದ್ದಾರೆ ಮತ್ತು ಪ್ರತ್ಯೇಕವಾಗಿ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಟ್ಟಿದೆ.

ಇಸ್ಕಾನ್ ಟೆಂಪಲ್

ಇಸ್ಕಾನ್ ಟೆಂಪಲ್

ಇಸ್ಕಾನ್ ಟೆಂಪಲ್ ಇದು ಒಂದು ಹಿಂದೂ ಧಾರ್ಮಿಕ ಸಂಸ್ಥೆ . ಇಲ್ಲಿನ ಮೂಲದೇವರು  “ಶ್ರೀ ರಾಧಾ ಕೃಷ್ಣ” .ಈ ದೇವಾಲಯವು 1997  ರಲ್ಲಿ “ಡಾ ಶಂಕರ್ ದಯಾಳ್ ಶರ್ಮ”  ರವರಿಂದ ಬೆಂಗಳೂರಿನ  ರಾಜಾಜಿನಗರದಲ್ಲಿ  ಉದ್ಘಾಟಿಸಲಾಯಿತು. ಇದು ನೂತನ ಶೈಲಿಯ ಮತ್ತು ವಿಶಾಲವಾದ ದೇವಾಲಯವಾಗಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ  ಪ್ರಸಾದ ವ್ಯವಸ್ಥೆಯು ಇಸ್ಕಾನ್ ಸಂಸ್ಥೆ ಕಲ್ಪಿಸಿಕೊಟ್ಟಿದೆ. ಇಸ್ಕಾನ್ ಸಂಸ್ಥೆಯ ಹಲವಾರು ಸಮಾಜ ಸೇವೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಬಹುಮುಖ್ಯ ಸೇವೆ ಎಂದರೆ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ  ಶಾಲೆಗಳಿಗೆ “ಅಕ್ಷಯ ಪಾತ್ರೆ”  ಯೋಜನೆಯ ಮುಖಾಂತರ ಪ್ರತಿದಿನ  ಶಾಲೆಯ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ    ಮತ್ತು ಉತ್ತಮ ರುಚಿಯ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ನಡೆಸುತ್ತಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಬೆಂಗಳೂರಿನ ಮೆಜೆಸ್ಟಿಕ್ ನಿಂದ 30 km ದೂರದಲ್ಲಿದೆ. ಇಲ್ಲಿ ವಿವಿಧ ಬಗೆಯ ಸಸ್ಯಗಳು,ಮರಗಳು,ಪ್ರಾಣಿ, ಪಕ್ಷಿ ಗಳನ್ನೂ ನೋಡಬಹುದು.  ಇದು ಒಂದು ಮೃಗಾಲಯವು ಆಗಿದೆ. ಚಿರತೆ,ಆನೆ,ಕರಡಿ,ಜಿಂಕೆ, ಕಾಡು ಕೋತಿ, ಕಾಡು ಬೆಕ್ಕು, ನೀರಾನೆ ಇನ್ನಿತರ ಪ್ರಾಣಿಗಳನ್ನೂ ನೋಡಬಹುದು  ಮತ್ತು ಕೊಕ್ಕರೆ, ಬಾತುಕೋಳಿ, ಉಷ್ಟ್ರಪಕ್ಷಿ, ನವಿಲು ಮುಂತಾದ ಪಕ್ಷಿಗಳನ್ನು ವೀಕ್ಷಿಸಬಹುದು. ಸಫಾರಿ ಮೂಲಕ ಕಾಡು ಪ್ರದೇಶ ವನ್ನು ನೋಡಬಹುದು .  ರಜಾ ದಿನಗಳಲ್ಲಿ ಪೋಷಕರು ಮಕ್ಕಳೊಂದಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವುದರಿಂದ  ಮಕ್ಕಳಿಗೆ ಪರಿಸರದ ಅರಿವು ಮೂಡುತ್ತದೆ.

ಶಿವ ದೇವಾಲಯ , ಮುರುಗೇಶ್ ಪಾಳ್ಯ

ಶಿವ ದೇವಾಲಯ , ಮುರುಗೇಶ್ ಪಾಳ್ಯ

ಬೆಂಗಳೂರಿನ ನೂತನ ಶೈಲಿಯ ದೇವಾಲಯಗಳಲ್ಲಿ ಮುರುಗೇಶ್ ಪಾಳ್ಯದ  ಶಿವನ ದೇವಾಲಯವು ಒಂದು , ಸುಮಾರು 65  ಅಡಿ ಎತ್ತರದ ಶಿವನ ಮೂರ್ತಿಯನ್ನು ಇಲ್ಲಿ ನಿರ್ಮಿಸಲಾಗಿದೆ.ಪಾರ್ವತಿ,ಗಣೇಶ, ನಂದಿ,ನವಗ್ರಹಗಳನ್ನು ಪೂಜಿಸಲಾಗುವುದು.ಈ ದೇವಾಲಯವನ್ನು 1995  ರಲ್ಲಿ “ರವಿ ವಿ ಮೆಲ್ವಾನಿ” ರವರು ಸ್ಥಾಪಿಸಿದರು. ಪ್ರತಿದಿನ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

ಬಸವನ ದೇವಸ್ಥಾನ (ಬುಲ್ ಟೆಂಪಲ್)

ಬಸವನ ದೇವಸ್ಥಾನ (ಬುಲ್ ಟೆಂಪಲ್)

ಬಸವನಗುಡಿಯ ಬುಲ್ ಟೆಂಪಲ್ ಅನ್ನು ಬೆಂಗಳೂರು ಸಂಸ್ಥಾಪಕ “ನಾಡಪ್ರಭು ಕೆಂಪೇಗೌಡ” ರವರು ನಿರ್ಮಿಸಿದ್ದಾರೆ.   ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಿದ್ದಾರೆ. ದೇವಾಲಯದ ವಿಶೇಷತೆ ಎಂದರೆ ಇಲ್ಲಿ 4 .5  ಮೀ ಎತ್ತರ ಮತ್ತು 6 .5   ಮೀ ಉದ್ದದ ನಂದಿ ವಿಗ್ರಹವನ್ನು ಕಾಣಬಹುದು.

ಹಲಸೂರು ಕೆರೆ

ಹಲಸೂರು ಕೆರೆ

ಬೆಂಗಳೂರು ಹಲವಾರು ಕೆರೆಗಳನ್ನು ಹೊಂದಿತ್ತು .  ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು  ಕೆರೆಗಳು ನಶಿಸಿಹೋಗಿವೆ. ಉಳಿದಿರುವ ಕೆರೆಗಳನ್ನು ಉಳಿಸಿಕೊಳ್ಳಲು  ಕರ್ನಾಟಕ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಬೆಂಗಳೂರಿನಲ್ಲಿ ಬೋಟಿಂಗ್ ಮಾಡಲು ಇಚ್ಛಿಸುವವರು ಹಲಸೂರು ಕೆರೆಯಲ್ಲಿ ಬೋಟಿಂಗ್ ಮಾಡಬಹುದು.

ವಂಡರ್ಲಾಅಮ್ಯೂಸ್ ಮೆಂಟ್ ಪಾರ್ಕ್ 

ವಂಡರ್ಲಾ ಅಮ್ಯೂಸ್ ಮೆಂಟ್ ಪಾರ್ಕ್

ವಂಡರ್ ಲಾ ಒಂದು ಮನರಂಜನಾ ಕೇಂದ್ರ .  ಇಲ್ಲಿ ಒಂದು ಬಾರಿ ಒಳಗಡೆ ಪ್ರವೇಶಿಸಿದರೆ ಮತ್ತೆ ಹೊರಗೆ ಬರುವ ಮನಸ್ಸಾಗುವುದಿಲ್ಲ. ರಜಾ ದಿನಗಳಲ್ಲಿ ವಾಟರ್ ಗೇಮ್ ಮುಂತಾದ ಗೇಮ್ ಗಳನ್ನೂ ಆಡಲು ಇಚ್ಛಿಸುವವರು ವಂಡರ್ಲಾ ಅಮ್ಯೂಸ್ ಮೆಂಟ್ ಪಾರ್ಕ್ ಹೋಗಬಹುದು.

Also Read: ಬೆಂಗಳೂರು ಅರಮನೆ ಒನ್ ನೇಶನ್ ಒನ್ ರೇಷನ್ ಕಾರ್ಡ್

 

WordPress database error: [Incorrect key file for table './yourmone_wp/wp_comments.MYI'; try to repair it]
SELECT SQL_CALC_FOUND_ROWS wp_comments.comment_ID FROM wp_comments WHERE ( comment_approved = '1' ) AND comment_post_ID = 2971 AND comment_parent = 0 ORDER BY wp_comments.comment_date_gmt ASC, wp_comments.comment_ID ASC