ಫಾಸ್ಟ್ ಟ್ಯಾಗ್( FASTag ) ನಿಂದ ಉದ್ಯೋಗ ಕಳೆದುಕೊಳ್ಳುವ ಬೀತಿಯಲ್ಲಿ ಸಿಬ್ಬಂದಿಗಳು ಮತ್ತು ವ್ಯಾಪಾರಿಗಳು.

0
1052
fast tag

ಡಿಸೆಂಬರ್ 1 ರಿಂದ ರಾಜ್ಯದಲ್ಲಿನ 36  ಟೋಲ್ ಸೇರಿದಂತೆ ಭಾರತಾದ್ಯಂತ 593 ಟೋಲ್ ಗಳಲ್ಲಿಯೂ  ಫಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿಗೆ ಬಂದಿದೆ. ಡಿಸೆಂಬರ್ 15  ರ ಒಳಗೆ ಎಲ್ಲ ವಾಹನಗಳಿಗೆ  ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಲು ಸರ್ಕಾರ ಆದೇಶವನ್ನು ನೀಡಿದೆ.

ರೇಡಿಯೋ ತರಂಗ ತಂತ್ರಜ್ಞಾನ ಹೊಂದಿರುವ ಈ ಟ್ಯಾಗ್ ಗಳು ಸ್ಟಿಕರ್ ರೂಪದಲ್ಲಿ ದೊರೆಯುತ್ತದೆ.ಇದನ್ನು ವಾಹನದ ವಿಂಡ್ ಶೀಲ್ಡ್ ಗಳಲ್ಲಿ ಅಳವಡಿಸಬೇಕು.  ಈಗಾಗಲೆ 22 ಬ್ಯಾಂಕ್ ಗಳು ಟ್ಯಾಗ್ ಗಳನ್ನೂ ಮಾರಾಟ ಮಾಡುತ್ತಿವೆ. paytm ಮುಖಾಂತರ ಆನ್ಲೈನ್ ನಲ್ಲೂ ಟ್ಯಾಗ್ ಗಳನ್ನೂ ಖರೀದಿಸಬಹುದು. ಟೋಲ್ ಬೂತ್ ಗಳ ಬಳಿಯು ಟ್ಯಾಗ್ ಗಳನ್ನೂ ಖರೀದಿಸುವ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

ಇಷ್ಟು ದಿನ ಹಣ ಪಾವತಿಸಲು ತುಂಬಾ ಸಮಯ ವಾಹನಗಳು ಕಾಯಬೇಕಿತ್ತು ಈ ಸಮಯದಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳು ತಮ್ಮ ಹೊಟ್ಟೆಪಾಡಿಗಾಗಿ ಕೆಲವು ತಿಂಡಿ , ಹೂವು, ಹಣ್ಣು, ಮಕ್ಕಳ ಆಟ ಸಾಮಾನು ಮತ್ತು ಮುಂತಾದ ವಸ್ತುಗಳನ್ನು  ಮಾರಿ ಜೀವನ ಸಾಗಿಸುತ್ತಿದ್ದರು. ಫಾಸ್ಟ್ ಟ್ಯಾಗ್ ಕಡ್ಡಾಯ ಜಾರಿಯಿಂದ ಹಣ ಪಾವತಿಸಲು ಕಾಯಬೇಕಾಗಿಲ್ಲ.

ವಾಹನಗಳು ಟೋಲ್ ಗಳಿಂದ ಹಾದುಹೋಗುವಾಗಲೆ ಸ್ವಯಂ ಚಾಲಿತವಾಗಿ ವಾಹನದ ಟ್ಯಾಗ್ ಅನ್ನು ಗುರುತಿಸಿ ಟೋಲ್ ದರವನ್ನು  ಸಂಗ್ರಹಿಸಲಾಗುತ್ತದೆ.  ಈಗ FASTag  ಯೋಜನೆಯಿಂದ ಹಲವು ಕುಟುಂಬಗಳು ಕಂಗಾಲಾಗಿವೆ. ಅಲ್ಲದೆ ಪ್ರತಿ ಟೋಲ್ ಗಳಲ್ಲಿ 30  ರಿಂದ 100  ಮಂದಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದರು ಅವರಿಗೂ ಕೆಲಸ ಕಳೆದುಕೊಳ್ಳುವ ಬೀತಿ ಕಾಡುತ್ತಿದೆ. ಆರ್ಥಿಕ ದೃಷ್ಟಿಯಿಂದ ಸಮಯ ಮತ್ತು ಪೆಟ್ರೋಲ್ ಉಳಿತಾಯ ಮಾಡುವ ಉದ್ದೇಶದಿಂದ ಸರ್ಕಾರ ಈ ಕಾನೂನನ್ನು ಜಾರಿ ಗೊಳಿಸಿದೆ. ಇದರಿಂದ ಸರ್ಕಾರಕ್ಕೆ ಲಾಭವಾದರೂ ಟೋಲ್ ಗೇಟ್ ಗಳನ್ನೆ ನಂಬಿಕೊಂಡಿರುವ ಅನೇಕ ಜನರಿಗೆ ಆತಂಕ ಸೃಷ್ಟಿಯಾಗಿದೆ

Also Read: ಹೆಮ್ಮೆಯ ಕನ್ನಡತಿ ಇನ್ಫೋಸಿಸ್ ಸಂಸ್ಥೆಯ ಒಡತಿಯಿಂದ ದೇವದಾಸಿಯರ ಕಲ್ಯಾಣಕ್ಕಾಗಿ 25 ಲಕ್ಷ ರೂಪಾಯಿ ದೇಣಿಗೆ.