ಈರುಳ್ಳಿ – ಕಳ್ಳರಿಗೆ ಆಟ ರೈತರಿಗೆ ಪ್ರಾಣಸಂಕಟ

0
681
onion

ಈ ವರ್ಷದ ಬರ ಮತ್ತು ನೆರೆ ಪ್ರವಾಹಗಳಿಂದ ಈರುಳ್ಳಿ ಬೆಲೆಯು  ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ.ಏರುತ್ತಿರುವ ಬೆಲೆಯಿಂದ ರೈತರಿಗೇನೊ ಲಾಭವಾಗುತ್ತಿದೆ.  ಆದರೆ ಬೆಳೆದ ಬೆಳೆ ಯನ್ನು ಮಾರುಕಟ್ಟೆಗೆ ಸಾಗಿಸುವ ಮೊದಲೆ ಈರುಳ್ಳಿಯನ್ನು ಕದಿಯುತಿದ್ದಾರೆ. ಕರ್ನಾಟಕದ ಗದಗ ಜಿಲ್ಲೆಯ ರೋಣಾ, ನರೇಗಲ್, ಗಜೇಂದ್ರಗಡ, ಲಕ್ಕುಂಡಿ ಮತ್ತು ಮುಂತಾದ ಗ್ರಾಮಗಳಲ್ಲಿ ಹೊಲಗಳಿಗೆ ನುಗ್ಗಿ ಈರುಳ್ಳಿಗಳನ್ನು ಕಳ್ಳತನ ಮಾಡುತ್ತಿದ್ದಾರೆ.

ನರೇಗಲ್ ಗ್ರಾಮದ ಗುರುಬಸಯ್ಯ ಎಂಬ ರೈತನ  ಹೊಲದಿಂದ ಸುಮಾರು 2  ಲಕ್ಷ ರೂಪಾಯಿ ಮೌಲ್ಯದ ಈರುಳ್ಳಿಯನ್ನು ಮತ್ತು ನಿಂಗಪ್ಪ ಎಂಬ ರೈತನ ಹೊಲದಿಂದ 30  ಚೀಲ ಈರುಳ್ಳಿಯನ್ನು ಕಳ್ಳರು ಕದ್ದಿದ್ದಾರೆ. ಗದಗದಲ್ಲೇ  ಸುಮಾರು 22 ಟನ್ ತೂಕದ ಈರುಳ್ಳಿಯನ್ನು ಕದ್ದಿದ್ದಾರೆ. ಇದರಿಂದ ಈರುಳ್ಳಿ ಬೆಳೆದ ರೈತರು ಹಗಲು ರಾತ್ರಿ ಬೆಳೆಗೆ ಕಾವಲು ಕಾಯುವಂತಾಗಿದೆ. ರಾಜ್ಯ ಮತ್ತು ರಾಷ್ಟ್ರದ ಅನೇಕ ರೈತರ ಪಾಡು ಇದೆ ಆಗಿದೆ. ಸೂರತ್ ನಲ್ಲೂ 250  ಕೆಜಿ ಈರುಳ್ಳಿ ಕಳ್ಳತನ ಮಾಡಿದ್ದಾರೆ. ನಾಸಿಕ್ ನಿಂದ ಗೋರಖ್ ಪುರಕ್ಕೆ ತೆರಳುತ್ತಿದ್ದ  20  ಲಕ್ಷ   ಬೆಲೆ ಬಾಳುವ  ಈರುಳ್ಳಿ ತುಂಬಿದ್ದ ಟ್ರಕ್  ಕಳ್ಳತನ ಮಾಡಿದ್ದಾರೆ.ಈ ರೀತಿ ದೇಶದಾದ್ಯಂತ ಈರುಳ್ಳಿ ಕಳ್ಳರು ಹೆಚ್ಚುತ್ತಿದ್ದಾರೆ. ಇದರಿಂದ ಕಷ್ಟ ಪಟ್ಟು ಬೆಳೆದ ಬೆಳೆಯು ಕಳ್ಳರ ಪಾಲಾಗುವುದನ್ನು ತಡೆಯಲು ರೈತರು  ನಾನಾ  ಕಷ್ಟ ಪಡುತ್ತಿದ್ದಾರೆ.